ಗುಡ್​ನ್ಯೂಸ್​; ಪಿಯುಗೆ ₹6,000, ಡಿಪ್ಲೋಮಾಗೆ 8,000, ಡಿಗ್ರಿ ಮಾಡಿದವರಿಗೆ ತಿಂಗಳಿಗೆ 10,000 ಸಿಗಲಿದೆ!

author-image
Veena Gangani
Updated On
ಗುಡ್​ನ್ಯೂಸ್​; ಪಿಯುಗೆ ₹6,000, ಡಿಪ್ಲೋಮಾಗೆ 8,000, ಡಿಗ್ರಿ ಮಾಡಿದವರಿಗೆ ತಿಂಗಳಿಗೆ 10,000 ಸಿಗಲಿದೆ!
Advertisment
  • ವಿದ್ಯಾರ್ಥಿಗಳಿಗಾಗಿಯೇ ಲಾಡ್ಲಾ ಭಾಯಿ ಯೋಜನೆಯನ್ನು ಜಾರಿಗೆ ತಂದ ಸರ್ಕಾರ
  • ‘ಲಾಡ್ಲಾ ಭಾಯಿ‘ ಅಡಿಯಲ್ಲಿರೋ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಿಗುವ ಹಣ ಎಷ್ಟು?
  • ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ’ಲಾಡ್ಲಾ ಭಾಯಿ‘ ಯೋಜನೆ ಜಾರಿಗೆ

ಮುಂಬೈ: ಸದ್ಯದಲ್ಲೇ ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈ  ಮುನ್ನವೇ ಸಿಎಂ ಏಕನಾಥ್​ ಶಿಂಧೆ ಲಾಡ್ಲಾ ಭಾಯ್ ಯೋಜನೆ ಅನ್ನೋ ಹೊಸ ಸ್ಕೀಮ್​ ಘೋಷಿಸಿದ್ದಾರೆ.publive-image

ಇದನ್ನೂ ಓದಿ: Kabini: ಉಕ್ಕಿ ಹರಿಯುತ್ತಿದ್ದಾಳೆ ಕಪಿಲೆ! ಪರಶುರಾಮ ದೇವಸ್ಥಾನ ಮುಳುಗಡೆ, ಮನೆ ಖಾಲಿ ಮಾಡುತ್ತಿದ್ದಾರೆ ಜನರು

‘ಲಾಡ್ಲಾ ಭಾಯ್​ ಯೋಜನೆ’ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದ ಯುವಕರು ಕಾರ್ಖಾನೆಯಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್‌ನಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಅವರು ಕೆಲಸದ ಅನುಭವವನ್ನು ಪಡೆಯುತ್ತಾರೆ. ಜೊತೆಗೆ ಇದು ಭವಿಷ್ಯದಲ್ಲಿ ಉದ್ಯೋಗಗಳನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಉಪಕ್ರಮವು ರಾಜ್ಯದಲ್ಲಿ ನುರಿತ ಉದ್ಯೋಗಿಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಈ ಭರವಸೆಯನ್ನು ನೀಡಲಾಗಿದೆ. ಈ ಸರ್ಕಾರ ಇಂತಹ ಯೋಜನೆಯನ್ನು ಪ್ರಕಟಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದ್ದಾರೆ.


">July 17, 2024

ಲಾಡ್ಲಾ ಭಾಯಿ ಯೋಜನೆಯ ಪ್ರಯೋಜನಗಳೇನು?

ಈ ಯೋಜನೆ ಅಡಿಯಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 6,000 ರೂಪಾಯಿ, ಡಿಪ್ಲೊಮಾ ಕೋರ್ಸ್ ಹೊಂದಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 8,000 ರೂಪಾಯಿಗಳು ಪಡೆಯುತ್ತಾರೆ ಮತ್ತು ಪದವಿಯನ್ನು ಪೂರ್ಣಗೊಳಿಸಿದವರಿಗೆ ತಿಂಗಳಿಗೆ 10,000 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಲಾಡ್ಲಾ ಭಾಯಿ ಯೋಜನೆಯಡಿಯಲ್ಲಿ ತಿಳಿಸಿದೆ. ಆದರೆ ವಿದ್ಯಾರ್ಥಿಗಳಿಗೆ ಈ ಕೆಳಗಿನ ಷರತ್ತುಗಳು ಅನ್ವಯಿಸುತ್ತವೆ. ಅರ್ಹ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಅವರೆಲ್ಲಾ ಮಹಾರಾಷ್ಟ್ರದ ನಿವಾಸಿಗಳಾಗಿರಬೇಕು. ಇಂಟರ್ನ್‌ಶಿಪ್‌ 6 ತಿಂಗಳವರೆಗೆ ಇರುತ್ತದೆ. ಅಭ್ಯರ್ಥಿಗಳು ತಮ್ಮ ಮಾಸಿಕ ಸಂಬಳವನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ಮೂಲಕ ಪಡೆಯುತ್ತಾರೆ. ಆದರೆ ಉದ್ಯೋಗದಾತರು ಕೇವಲ ಮಹಾರಾಷ್ಟ್ರದಲ್ಲಿ ಕೆಲಸ ಮಾಡಬೇಕು. ಉದ್ಯೋಗದಾತರಾಗಿ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ಇನ್ನೋವೇಶನ್ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರುವುದು. ಇದನ್ನು ಮೂರು ವರ್ಷಗಳವರೆಗೆ ಸ್ಥಾಪಿಸಲಾಗಿದೆ. ಇಪಿಎಫ್, ಇಎಸ್‌ಐಸಿ, ಜಿಎಸ್‌ಟಿ, ಡಿಪಿಐಟಿ ಮತ್ತು ಆಧಾರ್‌ನೊಂದಿಗೆ ನೋಂದಾಯಿಸಲಾಗಿದೆ. ಇದರ ಜೊತೆಗೆ ಸಂಯೋಜನೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment